News Cafe | PM Modi To Lay Foundation Stone For Bengaluru Suburban Rail Project | HR Ranganath | June 17, 2022

2022-06-17 10

ಬೆಂಗಳೂರಿಗರ ದಶಕಗಳ ಕನಸಿನ ಯೋಜನೆ ಉಪನಗರ ರೈಲಿಗೆ ಪ್ರಧಾನಿ ಮೋದಿ ಜೂನ್ 20 ರಂದು ಶಂಕುಸ್ಥಾಪನೆ ಮಾಡಲಿದ್ದಾರೆ. 2020ರ ಅಕ್ಟೋಬರ್‍ನಲ್ಲಿ ಕೇಂದ್ರ ಸರಕಾರ 15,767 ಕೋಟಿ ರೂ. ಘೋಷಿಸಿತ್ತು. 2022-2023ರ ಕೇಂದ್ರ ಬಜೆಟ್‍ನಲ್ಲಿ ಮೊದಲ ಹಂತದಲ್ಲಿ 850 ಕೋಟಿ ರು. ಅನುದಾನ ನೀಡಿದೆ. ರಾಜ್ಯ-ಕೇಂದ್ರದ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗೆ ಕರ್ನಾಟಕ ಸರ್ಕಾರ 5,087 ಕೋಟಿ, ಕೇಂದ್ರ ಸರ್ಕಾರ 3242 ಕೋಟಿ ರೂಪಾಯಿ ಹಾಗೂ ಸಾಲದ ಮೂಲಕ 7,438 ಕೋಟಿ ರೂಪಾಯಿ ಭರಿಸಲಾಗ್ತಿದೆ. ಒಟ್ಟು 4 ಕಾರಿಡಾರ್‍ಗಳಲ್ಲಿ 148.17 ಕಿ.ಮೀ. ಉದ್ದದ ಯೋಜನೆ ಇದಾಗಿದ್ದು, ಶೇ.85ರಷ್ಟು ಭೂಸ್ವಾಧೀನವೂ ಮುಗಿದಿದೆ. 2026ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಆದರೆ, 4 ಕಾರಿಡಾರ್‍ಗಳ ಪೈಕಿ ಬೈಯಪ್ಪನಹಳ್ಳಿ - ಚಿಕ್ಕಬಾಣವಾರ ಕಾರಿಡಾರ್‍ನ ಪೂರ್ವ ಸಿದ್ಧತಾ ಕಾಮಗಾರಿಗಳು ಮಾತ್ರ ಪೂರ್ಣಗೊಂಡು ಟೆಂಡರ್ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. 4 ಕಾರಿಡಾರ್‍ಗಳ ಡೀಟೇಲ್ಸ್ ಕ್ವಿಕ್ ಆಗಿ ನೋಡೋದಾದ್ರೆ...

#publictv #newscafe #hrranganath